ಕಕೇಲಿಯ : ಕಂಪಾಸಿóಟಿ ಕುಟುಂಬಕ್ಕೆ ಸೇರಿದ ಬಹು ಸುಂದರವಾದ ವಾರ್ಷಿಕ ಸಸ್ಯಜಾತಿ. ಇದನ್ನು ಸಾಮಾನ್ಯವಾಗಿ ಟ್ಯಾಸಲ್ ಫ್ಲವರ್ಸ್‌ ಅಥವಾ ಫ್ಲೋರಾಸ್ ಪೆಯಿಂಟ್ ಬ್ರಷ್ ಎಂದು ಕರೆಯುವುದು ವಾಡಿಕೆ. ಇದು ಕಳೆಯಂತೆ ಬೆಳೆಯುವುದರಿಂದ ಯಾವ ವಿಧವಾದ ಗಮನವನ್ನೂ ಕೊಡಬೇಕಾಗಿಲ್ಲ. ಅಲಂಕಾರಕ್ಕೋಸ್ಕರ ಮಡಿಗಳ ಅಂಚುಗಳಲ್ಲಿ ಬೆಳೆಸುತ್ತಾರೆ. ಗಿಡ 15" ಎತ್ತರ ಬೆಳೆಯುತ್ತದೆ. 10 ವಾರಗಳಲ್ಲಿ ಸಣ್ಣ ಕುಚ್ಚುಗಳಂತಿರುವ ಹಳದಿ, ಕಿತ್ತಳೆ, ಬಿಳುಪು ಮತ್ತು ಕಡುಗೆಂಪು ಬಣ್ಣದ ಹೂಗೊಂಚಲು ಕಾಣಿಸಿಕೊಳ್ಳುತ್ತವೆ.		(ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ